Home > ಏನಿಪ್ಪಾ ಇದು ನಮ್ಮ ಸೈಕಲ್

ಏನಿಪ್ಪಾ ಇದು ನಮ್ಮ ಸೈಕಲ್ ?

ಅಲ್ಲಾ ಗುರು ನಿಮ್ಮ ಉದ್ದೇಶನಾದರೂ ಏನು ?

ನಮ್ಮ ಬೆಂಗಳೂರು ನಗರದ ಹಾಗೂ ಇತರೆ ನಗರಗಳ ಅತಿ ದೊಡ್ಡ ಸಮಸ್ಯೆಯೆಂದರೆ ಸಂಚಾರ ಮತ್ತು ಸಾರಿಗೆ ವ್ಯವಸ್ಥೆ. ಈ ಸಮಸ್ಯೆಗೆ ಪರಿಹಾರವನ್ನು ಕಂಡು ಕೊಳ್ಳುವ ದಾರಿಯಲ್ಲಿ ನೂರಾರು ಪ್ಲ್ಯ್ ಓವರ್ಗಳು, ಸಬ್ ವೇ ಗಳು ಕಟ್ಟಿದ್ದರು ಅದ್ಯಾಕೋ ಸಮಸ್ಯೆ ಬಗೆ ಹರಿಯುವಂತಿಲ್ಲಾ. ಸಾರಿಗೆ ವ್ಯವಸ್ಥೆಯಂತು ಎಲ್ಲರ ಕೈ ಮೀರಿ ನಮ್ಮ ಧೀ:ಶಕ್ತಿಯನ್ನು ಪ್ರಾಣ ಶಕ್ತಿಯನ್ನು ಹೀರುತ್ತಿದೆ. ಈ ಸಮಸ್ಯೆ ವಿಶ್ವಕ್ಕೆ ಹೊಸದೇನಲ್ಲಾ.

ನಾವು ಈಗಿರುವ ಸ್ಥಿತಿಯಲ್ಲಿಯೇ ಯುರೋಪ್ ಖಾಂಡದ ಹಲವು ದೇಶಗಳು ಕೆಲವು ವರ್ಷಗಳ ಹಿಂದೆ ಇದ್ದವು. ಈಚಲು ಮರ ಬೆಳೆಯುವ ಮುಂಚೆ ಅದರ ಬೇರನ್ನೇ ಕಿತ್ತು ಹಾಕುವುದು ಸೂಕ್ತ ಎಂದು ಮಹಾತ್ಮರು ಹೇಳುತ್ತಾರೆ. ಅದರಂತೆ ಆಧುನಿಕ ಸಂಚಾರ ಮತ್ತು ಸಾರಿಗೆ ಸಮಸ್ಯೆಯ ಉತ್ಪತ್ತಿ ಅತಿಯಾದ ಕಾರ್ ಗಳು ಮತ್ತು ಖಾಸಗಿ ವಾಹನಗಳಿಂದ ಎಂಬ ಅರಿವು ಆ ಸಮಾಜಕ್ಕೆ ಗೋಚರವಾಯಿತು.ಇದರಿಂದ ಎಚ್ಚೆತ್ತು ಅವು ಕಂಡುಕೊಂಡ ಯಾನದ ವಾಹನವೆಂದರೆ “ಸೈಕಲ್” .

“ಸೈಕಲ್” ಜನಪ್ರಿಯ ಗೊಳಿಸಲು ಹಲವಾರು ಯೋಜನೆಗಳನ್ನು ಮತ್ತು ಕಾನೂನು ನೀತಿಗಳನ್ನು ತಂದದಲ್ಲದೇ ಟ್ರಾಫಿಕ್ ಸಮಸ್ಯೆಗಳಿಂದ ಉಂಟಾಗುವ ಪರಿಸರ ಮಾಲಿನ್ಯ,ಪ್ರಾಣ ಹಾನಿ ಹಾಗೂ ಸರ್ಕಾರದ ಕಾರ್ಯ ಚಟುವಟಿಕೆಯ ಮೇಲೆ ಬೀಳುವ ತೀವ್ರ ಒತ್ತಡದಿಂದ ಮುಕ್ತಿಯನ್ನು ಹೊಂದುವ ದಾರಿಯನ್ನು ಕಂಡು ಕೊಂಡರು.

ಈ ಮಾರ್ಗವನ್ನು ನಮ್ಮ ದೇಶದಲ್ಲಿ ಮಹಾತ್ಮ ಗಾಂಧಿಯವರು ಎಂದೋ

Src:http://www.calpeacepower.org/0101/images/1930-march-all_BG.jpg

ಕಂಡುಕೊಂಡಿದ್ದರು.ಆ ಮಹಾತ್ಮರು ಮತ್ತು ಧೀರ್ಘ ದರ್ಶಿಗಳು ತೋರಿದ ದಾರಿಯನ್ನು ನಾವು ಮರೆತು ಇಂದು ಅಲ್ಲಿಂದ ಇಲ್ಲಿಗೆ ಹಾರಿ ದಿನ ನಿತ್ಯ ಒದ್ದಾಡುತ್ತಿದ್ದೇವೆ.ಸಂಚಾರದಲ್ಲಿ ಒದ್ದಾಟ ನಮ್ಮ ನಿತ್ಯ ಆಟವಾಗಿ ಹೋಗಿದೆ.

ಈಗ ಆ ದೇಶಗಳಲ್ಲಿ ಸೈಕಲ್ ಸುಲಭವಾಗಿ ಕೈ ಎಟಕುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಸೈಕಲ್ ಗಳನ್ನು ನಿಲ್ಲಿಸಿರುತ್ತಾರೆ. ಸೈಕಲ್ ಬಳಸಲು ಅಪೇಕ್ಷಿಸುವರು ಮುಂಚೆಯೆ ನೊಂದಾಯಿಸಿಕೊಂಡಿರುತ್ತಾರೆ. ನೊಂದಾಣಿಕೆಯ ಜೊತೆಗೆ ಅವರಿಗೆ ಒಂದು ಕಾರ್ಡ್ ಸಿಗುತ್ತದೆ.ಆ ಕಾರ್ಡ್ ಮೂಲಕ ಅವರು ಸೈಕಲ್ ಬಾಡಿಗೆಗೆ ತೆಗೆದುಕೊಳ್ಳುತ್ತಾರೆ , ಹಾಗೆಯೇ ಮತ್ತೆ ಸೈಕಲ್ ಹಿಂದಿರುಗಿಸುತ್ತಾರೆ. ಅಲ್ಲಿಯ ತಂತ್ರಾಂಶ ಅವರು ಬಳಸಿದ ಕಾಲಕ್ಕೆ ತಕ್ಕಂತೆ ಅವರ ಕಾರ್ಡ್ ನಿಂದ ಹಣವನ್ನು ಪಾವತಿ ಮಾಡಿಕೊಳ್ಳುತ್ತದೆ.

ಇಂತಹ ಯೋಜನೆ ಫಲಕಾರಿಯಾಗಿ ಈ ಊರುಗಳಲ್ಲಿ ಚಾಲನೆಯಲ್ಲಿದೆ :
1> ವೆಲಿಬ್ , ಪ್ಯಾರಿಸ್ , ಫ್ರಾನ್ಸ್.
2> ಬೈಸಿಂಗ್ ,ಬಾರ್ಸಿಲೋನಾ ಸ್ಪೇನ್.

ಈ ಯೋಜನೆಯಿಂದ ಸಮುದಾಯಕ್ಕಾಗುವ ಲಾಭ :

೧> ಹಿಂಸೆ ಮತ್ತು ಒತ್ತಡ ಕಡಿಮೆಯಾಗುವುದು
ಪಾಶ್ಚಾತ್ಯ ಜಗತ್ತಿನಿಂದ ಬಂದಿರುವ ಆಧುನಿಕ ಸಾರಿಗೆ ವ್ಯವಸ್ಥೆ ರಸ್ತೆಯನ್ನು ಬಿಸಿ ರಕ್ತದಲ್ಲಿ ತೋಯ್ದು ಹಿಂಸೆಯ ಪಥವನ್ನಾಗಿ ಪರಿವರ್ತಿಸಿದೆ.ನಿತ್ಯ ಲೆಕ್ಕ ವಿಲ್ಲದಷ್ಟು ಮಂದಿ ಸಾವನ್ನು ಹಿಂಸೆಯ ನೋವನ್ನು ಅನುಭವಿಸುತ್ತಾರೆ.
ನಮ್ಮ ನಾಡಿನ ಚರಿತ್ರೆಯಲ್ಲಿ ಹಾಗೂ ನಮ್ಮ ನಾಡಿನ ಜನರ ಹೃದಯಾಂತರಂಗದಲ್ಲಿ ಅಹಿಂಸೆಯ ಸಂಸ್ಕೃತಿ ಬೆರೆತು ಹೋಗಿದೆ. ಇಂದು ಜಗತ್ತು ಹಿಂಸೆಯ ಬಲೆಯಲ್ಲಿ ಸಿಳುಕಿ ಛಿದ್ರ ಛಿದ್ರ ವಾಗಿರುವಾಗ ನಾವು ಕರುನಾಡಿನ ಮಕ್ಕಳು ಕೂಡಿ ಅಹಿಂಸೆಯ ಹೊಸ ಪಥದ ಸಂಶೋಧನೆ ಮಾಡ ಬೇಕಾಗಿದೆ.ಸೈಕಲ್ ಅಹಿಂಸೆಗೆ ಒಳ್ಳೆಯ ವಾಹನ.

೨> ಸರ್ಕಾರಕ್ಕೆ ಹಣದ ಉಳಿತಾಯ

ಹೆಚ್ಚು ಮಂದಿ ಸೈಕಲ್ ಬಳಸಿದಷ್ಟು ಹೆಚ್ಚು ಹೆಚ್ಚು ಹಣ ಅನಗತ್ಯ ಯೋಜನೆಗಳಿಗೆ ವ್ಯಯವಾಗುವುದು ನಿಲ್ಲುತ್ತದೆ.ಇದೇ ಹಣವನ್ನು ಸರ್ಕಾರ ಸದುಪಯೋಗ ಮಾಡಿ ಕೊಳ್ಳಬಹುದು.

೩> ಪರಿಸರ ಮಾಲಿನ್ಯವಂತೂ ತಾನೇ ತಾನಾಗಿ ನಿಂತು ಹೋಗುತ್ತದೆ.

೪> ನಗರದ ಜನ ಜೀವನದಲ್ಲಿ ಆರೋಗ್ಯ ನವೋಲ್ಲಾಸ ಮತ್ತು ಲವಲವಿಕೆ ಕುಣಿದಾಡುತ್ತಿರುತ್ತದೆ.

೫> ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮ ಯೋಜನೆಯ ತಂತ್ರಾಂಶವನ್ನು ಮುಕ್ತವಾಗಿ ಎಲ್ಲರಿಗೂ ಲಭ್ಯವಾಗುವಂತೆ ನಾವು ಆಶ್ವಾಸನೆಯನ್ನು ನೀಡುತ್ತೇವೆ. ಇದರಿಂದ ಈ ಯೋಜನೆಯ ಲಾಭ ಕೇವಲ ಕನ್ನಡಿಗರಷ್ಟೇ ಅಲ್ಲದೇ ಇಡಿ ವಿಶ್ವದ ಸಮುದಾಯ ಪಡೆಯುತ್ತದೆ.

೬> ನಾಳೆ ಮೆಟ್ರೋ ಬೆಂಗಳೂರಿನಲ್ಲಿ ಬಂದ ನಂತರ ಮೆಟ್ರೋ ಸ್ಟೇಷನ್ ಗಳಲ್ಲಿ ವಾಹನಗಳನ್ನು ನಿಲ್ಲಿಸಲು ಸ್ಥಳದ ಒತ್ತಡವಿರುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಆದರಿಂದ ಮೆಟ್ರೋ ಸ್ಟೇಷನ್ ತಲುಪಲು ಸೈಕಲ್ ಬಳಸಿದರೆ ಮೆಟ್ರೋ ಯೋಜನೆಗೆ ಈ ನಮ್ಮ ಯೋಜನೆ ಪೂರಕವಾಗುತ್ತದೆ.

ಗುರು: ಇದು ಮಾಡೋದಕ್ಕೆ ನಾವು ನಿಮ್ಗೇ ಹೆಂಗೆ ಸಹಾಯ ಮಾಡ್ ಬಹುದು ?

ಅಣ್ಣಾ, ಈ ಸೈಕಲ್ ಪ್ರಾಜೆಕ್ಟ್ ಒಂದು ಸಣ್ಣ ಪ್ರಯೋಗ. ನಿಮ್ಮ ಬಳಿ ಸ್ವಲ್ಪ ಸಮಯ ಇದ್ದರೆ ನಮ್ಮ ಜೊತೆ ಕೈಜೋಡಿಸಿ – ಒಟ್ಟಿಗೆ ತಂತ್ರಾಂಶ ಮಾಡೋಣ ಅಥ್ವಾ ನೀವು ನಮ್ಮ ಪ್ರಾಜೆಕ್ಟ್ ಗೆ ಧನ ಸಹಾಯ ಕೂಡ ಮಾಡಬಹುದು. ಅಥ್ವಾ ಹತ್ತು ಸೈಕಲ್ ದಾನ ಕೊಟ್ಟು ಸಹಕರಿಸಬಹುದು.

ಗುರು:ಸರ್ಕಾರ ಅಥ್ವಾ ಬೆಂಗಳೂರು ವಿಶ್ವವಿದ್ಯಾಲಯದವರು ಹಣ ಕೊಡ್ತಾ ಇದ್ದಾರ ?

ಇಲ್ಲಾ ! ಇದು ನಾವೇ ಛಂದ ಎತ್ತಿ ಪ್ರಯೋಗ ಮಾಡ್ತಿರೋದು. ಬೆಂಗಳೂರು ವಿಶ್ವವಿದ್ಯಾಲಯದವರಾಗಲಿ ಸರ್ಕಾರವಾಗಲಿ ಹಣ ಕೊಡ್ತಾ ಇಲ್ಲಾ. ಅದರಿಂದ ನಾವು ಸಮುದಾಯದ ಉದಾರತೆಯ ಮೇಲೆ ನಂಬಿಕೆ ಇಟ್ಟು ಈ ಕಾರ್ಯಕ್ಕೆ ಕೈ ಹಾಕಿರೋದು.

ಗುರು: ನಮ್ಗೇ ಆಸಕ್ತಿ ಇದೆ ಏನ್ ಮಾಡೋದು ?

ನೀವು murali@nammacycle.in ಗೆ ಒಂದು ಈ-ಮೇಲ್ ಕಳುಹಿಸಿ. ನಿಮ್ಮ ಸಹಾಯ ನಮ್ಗೇ ಆನೆ ಬಲ ಕೊಡುತ್ತೆ.

 

 

Your email address will not be published. Required fields are marked *

*